ನೀನು ಗಂಡು ನಾನು ಹೆಣ್ಣು ...
ನೀನು ಗಂಡು ನಾನು ಹೆಣ್ಣು ...
ಧೈರ್ಯ ನಿನ್ನನ್ನಾವರಿಸಬೇಕು, ನೀನು ಗಂಡು
ಸಹನೆ ನಿನ್ನ ಉಸಿರಾಗಬೇಕು , ನೀನು ಹೆಣ್ಣು
ಭಾವುಕತೆ ನಿನ್ನ ಪಾಲಲ್ಲ , ನೀನು ಗಂಡು
ಸ್ವಾತಂತ್ರ ನಿನಗಿಲ್ಲ, ನೀನು ಹೆಣ್ಣು
ವೃತ್ತಿಯೇ ನಿನ್ನ ದೇವರು , ನೀನು ಗಂಡು
ಪತಿಯೇ ನಿನ್ನ ದೇವರು , ನೀನು ಹೆಣ್ಣು
ಕೋಪ ನಿನಗೆ ಸಹಜ ಗುಣ, ನೀನು ಗಂಡು
ತ್ಯಾಗ ನಿನಗೆ ಸುಲಭ, ನೀನು ಹೆಣ್ಣು
ಹೀಗಿರುವಾಗ ತಾರತಮ್ಯದ ಗಂಟು
ಸುಗಮದ ಹಾದಿಯಲ್ಲ ನನ್ನ ನಿನ್ನ ನಂಟು
ಧೈರ್ಯ ನಿನ್ನನ್ನಾವರಿಸಬೇಕು, ನೀನು ಗಂಡು
ಸಹನೆ ನಿನ್ನ ಉಸಿರಾಗಬೇಕು , ನೀನು ಹೆಣ್ಣು
ಭಾವುಕತೆ ನಿನ್ನ ಪಾಲಲ್ಲ , ನೀನು ಗಂಡು
ಸ್ವಾತಂತ್ರ ನಿನಗಿಲ್ಲ, ನೀನು ಹೆಣ್ಣು
ವೃತ್ತಿಯೇ ನಿನ್ನ ದೇವರು , ನೀನು ಗಂಡು
ಪತಿಯೇ ನಿನ್ನ ದೇವರು , ನೀನು ಹೆಣ್ಣು
ಕೋಪ ನಿನಗೆ ಸಹಜ ಗುಣ, ನೀನು ಗಂಡು
ತ್ಯಾಗ ನಿನಗೆ ಸುಲಭ, ನೀನು ಹೆಣ್ಣು
ಹೀಗಿರುವಾಗ ತಾರತಮ್ಯದ ಗಂಟು
ಸುಗಮದ ಹಾದಿಯಲ್ಲ ನನ್ನ ನಿನ್ನ ನಂಟು
Comments
Post a Comment