Posts

Showing posts from 2017

ಒಳ್ಳೆ ಕಾಲ ...

ಹೊಸತನವ ಮರಳಿಸುವುದೇ? ಸವಿಗನಸ ಅರಳಿಸುವುದೇ? ಮರೆಯಾದ ನಗುವ, ಮೊಗವೇರಬಲ್ಲದೇ ? ಹೊರೆಯಾದ ಮನವು , ಹಗುರವಾಗುವುದೇ ? ಒಳ್ಳೆ ಕಾಲ ಎದೆಗೊದ್ದು , ಮತ್ತೆ ಬರುವುದೇ? 

ಅವಳು ... ಅವನು ...

ಅವಳು ... ಅವನು ... ಅವನ ರಟ್ಟೆಯ ದರ್ಪಕೆ ಬಿಸಿ ಉಸಿರ ಮುತ್ತಾದವಳು ಅವನ ಸ್ವಾರ್ಥದ ಶಿಖೆಯಲ್ಲಿ , ತನ್ನ ಕನಸ ಉರಿಸಿದವಳು ಬೆಲೆ ಸಿಗದ ಭಾವಗಳ, ಹೆರದೆ ಬಂಜೆಯಾದವಳು ಅಗ್ಗದ ಚಿಂತನೆಗಳಿಗೆ, ಮನವ ಶಿಲೆಯಾಗಿಸಿದವಳು ಸಾವಿರ ಮಾತುಗಳೊಡನೆ ಮೂಕಿಯಾದವಳು ಜಂಟಿಯಾಗಿದ್ದು, ಒಂಟಿಯಾದವಳು ಅವಳು... ಅವನು...

ನೀನು ಗಂಡು ನಾನು ಹೆಣ್ಣು ...

ನೀನು ಗಂಡು ನಾನು ಹೆಣ್ಣು ... ಧೈರ್ಯ ನಿನ್ನನ್ನಾವರಿಸಬೇಕು, ನೀನು ಗಂಡು ಸಹನೆ ನಿನ್ನ ಉಸಿರಾಗಬೇಕು , ನೀನು ಹೆಣ್ಣು ಭಾವುಕತೆ ನಿನ್ನ ಪಾಲಲ್ಲ , ನೀನು ಗಂಡು ಸ್ವಾತಂತ್ರ ನಿನಗಿಲ್ಲ, ನೀನು ಹೆಣ್ಣು ವೃತ್ತಿಯೇ ನಿನ್ನ ದೇವರು , ನೀನು ಗಂಡು ಪತಿಯೇ ನಿನ್ನ ದೇವರು , ನೀನು ಹೆಣ್ಣು ಕೋಪ ನಿನಗೆ ಸಹಜ  ಗುಣ, ನೀನು ಗಂಡು ತ್ಯಾಗ ನಿನಗೆ ಸುಲಭ, ನೀನು ಹೆಣ್ಣು ಹೀಗಿರುವಾಗ ತಾರತಮ್ಯದ ಗಂಟು ಸುಗಮದ ಹಾದಿಯಲ್ಲ ನನ್ನ ನಿನ್ನ ನಂಟು