ಬದಲಾದ ಸಮಯದೊಳಗೆ ......
ಬದಲಾದ ಸಮಯದೊಳಗೆ.... ಭಾವಗಳು, ನಿಜವೋ !!?? ಭ್ರಮೆಯೋ !!??
ಬದಲಾದ ಸಮಯದೊಳಗೆ... ಬದಲಾಗಿದೆ ಎಲ್ಲವು !!!
ಅಥವಾ ಬದಲಾಗಿದೆ ಎನ್ನುವ ಭ್ರಮೆಯೇ!!??
ಸಾಗುವ ದಾರಿ ಕಟಿಣವಾಗಿದೆ,
ಅಥವಾ ಕಟಿಣಾ ಎನ್ನುವ ಭ್ರಮೆಯ ಭಾವವೇ!!??
ಬದಲಾದ ನೋಟಕೆ ನೀನು ಕಾರಣವೆ!!
ಅಥವಾ ನನ್ನ ಚಿಂತನೆಯೇ !!??
ತಿಳಿಯದಾಗಿದೆ....
ಅದಾವ ಭಾವ ನಮ್ಬಿಬ್ಬರ ದೂರ ಮಾಡಿದೆ!!
ಅಥವಾ ಭಾವ ಕೇವಲ ಭ್ರಮೆಯೇ!!??
ಬಾಳಲಿ ಚೈತನ್ಯ ಕುಗ್ಗಿದೆ!!
ಅಥವಾ ಕುಗ್ಗುವೆನೆಂಬ ಭೀತಿ ಕುಗ್ಗಿಸಿದೆಯೇ!!??
ಎಲ್ಲೆಲ್ಲೂ ಅತೃಪ್ತಿ, ಅಸಮದಾನ!!
ಇರಬಹುದೇನೋ ಇದು ಬದುಕಿನ ಇನ್ನೊದು ಪಾಠ !!!
ಬದುಕು ಭಾವನೆಗಳ ಸರೋವರ :) ಇಲ್ಲಿ ಈಸ ಬೇಕು ಇದ್ದು ಜಯಿಸಬೇಕು :) ಏನಂತೀರಿ!!? :P :)

Comments
Post a Comment