ನೀನು ಗಂಡು ನಾನು ಹೆಣ್ಣು ... ಧೈರ್ಯ ನಿನ್ನನ್ನಾವರಿಸಬೇಕು, ನೀನು ಗಂಡು ಸಹನೆ ನಿನ್ನ ಉಸಿರಾಗಬೇಕು , ನೀನು ಹೆಣ್ಣು ಭಾವುಕತೆ ನಿನ್ನ ಪಾಲಲ್ಲ , ನೀನು ಗಂಡು ಸ್ವಾತಂತ್ರ ನಿನಗಿಲ್ಲ, ನೀನು ಹೆಣ್ಣು ವೃತ್ತಿಯೇ ನಿನ್ನ ದೇವರು , ನೀನು ಗಂಡು ಪತಿಯೇ ನಿನ್ನ ದೇವರು , ನೀನು ಹೆಣ್ಣು ಕೋಪ ನಿನಗೆ ಸಹಜ ಗುಣ, ನೀನು ಗಂಡು ತ್ಯಾಗ ನಿನಗೆ ಸುಲಭ, ನೀನು ಹೆಣ್ಣು ಹೀಗಿರುವಾಗ ತಾರತಮ್ಯದ ಗಂಟು ಸುಗಮದ ಹಾದಿಯಲ್ಲ ನನ್ನ ನಿನ್ನ ನಂಟು
Comments
Post a Comment